ಹಾರ್ವರ್ಡ್ ವಿವಿ ಪತ್ರಿಕೋದ್ಯಮ ಪ್ರಾಧ್ಯಾಪಕರಾಗಲಿರುವ ಎನ್ಡಿಟಿವಿ ಪತ್ರಕರ್ತೆ ನಿಧಿ ರಾಝ್ದನ್

ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿಧಿ ಮಾಡಿದ ವರದಿಗಾರಿಕೆಗೆ ಇತ್ತೀಚೆಗಷ್ಟೇ ಪ್ರತಿಷ್ಠಿತ ಇಂಟರ್‌‍ನ್ಯಾಷನಲ್ ಪ್ರೆಸ್ ಇನ್ಸಿಟ್ಯೂಟ್ ಇಂಡಿಯಾ ಪ್ರಶಸ್ತಿ ಪಡೆದಿದ್ದರು.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಭಾರತೀಯ ಪತ್ರಿಕೋದ್ಯಮದಲ್ಲಿನ ವಿಶ್ವಾಸಾರ್ಹ ಪತ್ರಕರ್ತರಲ್ಲಿ ಓರ್ವರಾದ ಎನ್ಡಿಟಿವಿ ಪತ್ರಕರ್ತೆ ನಿಧಿ ರಾಝ್ದನ್ ಎರಡು ದಶಕಗಳ ಸೇವೆಯ ಬಳಿಕ ಉದ್ಯೋಗ ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಆರ್ಟ್ಸ್ ಎಂಡ್ ಸಾಯನ್ಸಸ್ ವಿಭಾಗದಲ್ಲಿ ಪತ್ರಿಕೋದ್ಯಮ ಅಸೋಸಿಯೆಟ್ ಪ್ರೊಫೆಸರ್ ಆಗಿ ತನ್ನ ವೃತ್ತಿ ಬದುಕಿನ ಹೊಸ ಅಧ್ಯಾಯ ಆರಂಭಗೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಎನ್ಡಿಟಿವಿ ನನಗೆ ಎಲ್ಲವನ್ನೂ ಕಲಿಸಿದೆ. ನನಗೆ ಅವಕಾಶ ನೀಡಿದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರಿಗೆ ಧನ್ಯವಾದ ಎಂದಿದ್ದಾರೆ. ಇಪ್ಪತ್ತೆರಡು ವರ್ಷ ವಯಸ್ಸಿನಲ್ಲಿ ನನ್ನ ಮೇಲೆ ವಿಶ್ವಾಸ ಇರಿಸಿ ಅವಕಾಶ ನೀಡಿದಿರಿ. ಇಲ್ಲಿ ಕಲಿತ ಮೌಲ್ಯಗಳ ಬಗ್ಗೆ, ಮಾಡಿದ ಕೆಲಸದ ಬಗ್ಗೆ ಹೆಮ್ಮೆ ಹೊಂದಿದ್ದೇನೆ ಎಂದಿದ್ದಾರೆ.

ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿಧಿ ಮಾಡಿದ ವರದಿಗಾರಿಕೆಗೆ ಇತ್ತೀಚೆಗಷ್ಟೇ ಪ್ರತಿಷ್ಠಿತ ಇಂಟರ್‌‍ನ್ಯಾಷನಲ್ ಪ್ರೆಸ್ ಇನ್ಸಿಟ್ಯೂಟ್ ಇಂಡಿಯಾ ಪ್ರಶಸ್ತಿ ಪಡೆದಿದ್ದರು.

ನಿಧಿ ‘ಲೆಫ್ಟ್ ರೈಟ್ ಎಂಡ್ ಸೆಂಟರ್ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಗುರುತಿಸಲ್ಪಟ್ಟರು.

Get real time updates directly on you device, subscribe now.