ಭಾರತ ಸೇನೆಯ ಶೌರ್ಯಕ್ಕೆ ಸಾಟಿ ಇಲ್ಲ: ಲಡಾಖ್‌ನಲ್ಲಿ ಪ್ರಧಾನಿ ಮೋದಿ
ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದ ಎರಡು ವಾರಗಳ ಬಳಿಕ ಭೇಟಿ ನೀಡಿದ ಪ್ರಧಾನಿ.
ನಿಮ್ಮ ಭುಜಗಳು ಪರ್ವತಗಳಿಗಿಂತಲೂ ಬಲಿಷ್ಠವಾದುದು ಎಂದು ಲಡಾಕ್‌ನಲ್ಲಿ ಯೋಧರನ್ನು ಉದ್ದೇಶಿಸಿ ಪ್ರಧಾನಿ ನುಡಿದರು.
ಕರಾವಳಿ ಕರ್ನಾಟಕ ವರದಿ
ಲೇಹ್: ನಿಮ್ಮ ಧೈರ್ಯ ನೀವು ಕರ್ತವ್ಯ ನಿರ್ವಹಿಸುತ್ತಿರುವ ಪರ್ವತಶ್ರೇಣಿಗಳಿರುವ ಪ್ರದೇಶಕ್ಕಿಂತಲೂ ಎತ್ತರದಲ್ಲಿದೆ. ನಿಮ್ಮ ಶೌರ್ಯದ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ. ನಿಮ್ಮ ಸಾಹಸಗಾಥೆ ಮನೆಮನೆಯಲ್ಲೂ ಪ್ರತಿಧ್ವನಿಸುತ್ತಿದೆ, ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ಮತ್ತೊಮ್ಮೆ ಗೌರವ ಅರ್ಪಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದ ಎರಡು ವಾರಗಳ ಬಳಿಕ ಭೇಟಿ ನೀಡಿದ ಪ್ರಧಾನಿ ಯೋಧರನ್ನು ಉದ್ದೇಶಿಸಿ ಮಾತಾಡಿದರು.
ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು ನೋಡಿದ್ದಾರೆ. ನಿಮ್ಮ ಭುಜಗಳು ಪರ್ವತಗಳಿಗಿಂತಲೂ ಬಲಿಷ್ಠವಾದುದು. ನಿಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆ ದೃಢವಾದುದು ಎಂದು ಲಡಾಕ್‌ನಲ್ಲಿ ಯೋಧರನ್ನು ಉದ್ದೇಶಿಸಿ ಪ್ರಧಾನಿ ನುಡಿದರು.