ಅಲಾಸ್ಕಾ: ವಿಮಾನಗಳ ಡಿಕ್ಕಿ; ಸಂಸದ ಸೇರಿ ಏಳು ಮಂದಿ ಮೃತ್ಯು
ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಸಾವಪ್ಪಿದರು.
ಕರಾವಳಿ ಕರ್ನಾಟಕ ವರದಿ
ಅಲಾಸ್ಕ: ವಿಮಾನಗಳು ಆಗಸದಲ್ಲೇ ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ಶುಕ್ರವಾರ ನಡೆದಿದ್ದು, ಅಮೆರಿಕದ ಸಂಸದ ಗ್ಯಾರಿ ನೋಪ್ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.
ಅಲಾಸ್ಕದ ಸೊಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಲಾಸ್ಕಾ ರಾಜ್ಯದ ಟ್ರೂಪರ್ಸ್ ತಿಳಿಸಿದ್ದಾರೆ.
ಸಂಸದ ಗ್ಯಾರಿ ನೋಪ್ ಅವರು ವಿಮಾನವೊಂದನ್ನು ಚಲಾಯಿಸುತ್ತಿದ್ದರು ಮತ್ತು ವಿಮಾನದಲ್ಲಿ ಅವರು ಮಾತ್ರ ಇದ್ದರು. ಮತ್ತೊಂದು ವಿಮಾನದಲ್ಲಿ ದಕ್ಷಿಣ ಕರೊಲಿನದ ನಾಲ್ಕು ಜನ ಪ್ರವಾಸಿಗರು, ಓರ್ವ ಗೈಡ್ ಹಾಗೂ ವಿಮಾನದ ಪೈಲಟ್ ಇದ್ದರು.
ವಿಮಾನಗಳ ಡಿಕ್ಕಿ ಬಳಿಕ ಅಲಾಸ್ಕಾ ಹೆದ್ದಾರಿಯ ಮೇಲೆ ಬಿದ್ದಿದ್ದವು. ಸ್ಥಳೀಯರು ವಿಮಾನದೊಳಗಿದ್ದವರನ್ನು ಹೊರಗೆ ತೆಗೆದಿದ್ದರು. ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾದರೂ ಮಾರ್ಗ ಮಧ್ಯದಲ್ಲೇ ಸಾವಪ್ಪಿದರು.