ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಲೇ ಮಾಸ್ಕ್ ತೆಗೆದ ಡೊನಾಲ್ಡ್ ಟ್ರಂಪ್

ತಾನು ಪ್ರಚಾರಕ್ಕೆ ಶೀಘ್ರವೇ ಮರಳುವುದಾಗಿ ಘೋಷಿಸಿದರು.

ಕೊರನಾ ವೈರಸ್ ನಿಮ್ಮನ್ನು ಸೋಲಿಸಲು  ಬಿಡಬೇಡಿ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ಕೋವಿಡ್‌ಗೆ ಯಾರೂ ಭಯಪಡಬೇಡಿ ಎಂದು ಸಲಹೆ.

ಕರಾವಳಿ ಕರ್ನಾಟಕ ವರದಿ
ವಾಷಿಂಗ್ಟನ್: ಕೋವಿಡ್ ಸೋಂಕಿಗೆ ಒಳಗಾದ ಬಳಿಕ ನಾಲ್ಕು ದಿನಗಳಿಂದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಶ್ವೇತ ಭವನ ಪ್ರವೇಶಿಸುತ್ತಲೇ ಮಾಸ್ಕ್ ತೆಗೆದಿದ್ದಾರೆ.

ಈ ಸಂದರ್ಭ ಅವರು ತಾನು ಪ್ರಚಾರಕ್ಕೆ ಶೀಘ್ರವೇ ಮರಳುವುದಾಗಿ ಘೋಷಿಸಿದರು.

ಶ್ವೇತ ಭವನಕ್ಕೆ ತೆರಳುವ ಮೊದಲು ತಾನು ಆರೋಗ್ಯವಂತನಾಗಿ ಸದೃಢನಾಗಿ ಇರುವಂತೆ ಬಿಂಬಿಸುವ ಸರಣಿ ಟ್ವೀಟ್ ಮಾಡಿದ್ದಾರೆ. ಕೋವಿಡ್‌ಗೆ ಯಾರೂ ಭಯಪಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

ಕೊರನಾ ವೈರಸ್ ನಿಮ್ಮನ್ನು ಸೋಲಿಸಲು  ಬಿಡಬೇಡಿ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Get real time updates directly on you device, subscribe now.