ಪಶ್ಚಿಮ ಘಟ್ಟಗಳಲ್ಲಿ ಮುಚ್ಚಿಹೋಗಿದ್ದ ಪುರಾತನ ಪೋರ್ಚುಗೀಸ್ ಕಟ್ಟಡ ಪತ್ತೆ!
‘ದೂಧ್ ಸಾಗರ್’ ಜಲಪಾತದಿಂದ ಕೂಗಳತೆ ದೂರದಲ್ಲಿದೆ.
ಕರ್ನಾಟಕ-ಗೋವಾ ಗಡಿ ಭಾಗದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಎರಡು ಅಂತಸ್ತಿನ ಪುರಾತನ ಕಟ್ಟಡ ದಶಕಗಳಿಂದ ಮುಚ್ಚಿಹೋಗಿತ್ತು.
ಕರಾವಳಿ ಕರ್ನಾಟಕ ವರದಿ
ಹುಬ್ಬಳ್ಳಿ: ‘ದೂಧ್ ಸಾಗರ್’ ಜಲಪಾತದಿಂದ ಕೂಗಳತೆ ದೂರದಲ್ಲಿರುವ ‘ಕ್ಯಾಸ್ಟೆಲ್ ರಾಕ್’ ಬಳಿಯ ಬ್ರಗಾನ್ಜಾ ಘಾಟ್ ನಲ್ಲಿ ಮುಚ್ಚಿಹೋಗಿದ್ದ ನೂರಮುವತ್ತೈದು ವರ್ಷಗಳ ಪುರಾತನ ಪೋರ್ಚುಗೀಸ್ ಕಾಲದ ಭವ್ಯ ಕಟ್ಟಡವೊಂದನ್ನು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ಕಟ್ಟಡವನ್ನು ರಕ್ಷಿಸಿ ಪ್ರವಾಸಿಗರಿಗೆ ತಂಗಲು ಅವಕಾಶ ಮಾಡಿಕೊಡುವ ಚಿಂತನೆ ನೈಋತ್ಯ ರೈಲ್ವೆಯ ಅಧಿಕಾರಿಗಳದ್ದಾಗಿದೆ
ಕರ್ನಾಟಕ-ಗೋವಾ ಗಡಿ ಭಾಗದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಎರಡು ಅಂತಸ್ತಿನ ಪುರಾತನ ಕಟ್ಟಡ ದಶಕಗಳಿಂದ ಮುಚ್ಚಿಹೋಗಿತ್ತು.
ಎರಡು ಅಂತಸ್ತಿನ ಕಟ್ಟಡವನ್ನು ವೆಸ್ಟ್ ಆಫ್ ಇಂಡಿಯಾ ಪೋರ್ಚುಗೀಸ್ ಗ್ಯಾರೆಂಟೀಡ್ ರೈಲ್ವೆ (ಡಬ್ಲ್ಯುಐಪಿಜಿಆರ್) ಕಂಪನಿ 1885ರಲ್ಲಿ ನಿರ್ಮಿಸಿದ್ದು, ಮೊದಲ ಬಾರಿ ಮೀಟರ್ ಗೇಜ್ ರೈಲು ಸಂಚಾರ ಪ್ರಾರಂಭವಾದಾಗ ರೈಲು ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿತ್ತು.