ಫಿಫಾ ವಿಶ್ವ ಕಪ್: ಜರ್ಮನಿಯನ್ನು ಸೋಲಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟ ಸೌತ್ ಕೊರಿಯಾ
ಹಾಲಿ ಚಾಂಪಿಯನ್ ಜರ್ಮನಿಗೆ ಮುಖಭಂಗ
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಎಫ್ ಗ್ರೂಪಿನ ಸೌತ್ ಕೊರಿಯಾ-ಜರ್ಮನಿ ಪಂದ್ಯದಲ್ಲಿ ಸೌತ್ ಕೊರಿಯಾ 2-0ರ ಗೆಲುವು ಸಾಧಿಸಿ ಹಾಲಿ ಚಾಂಪಿಯನ್ ಜರ್ಮನಿ ಪಂದ್ಯಾಟದಿಂದ ಹೊರಬಿದ್ದಿದೆ.
ಮೊಸ್ಕೊ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಎಫ್ ಗ್ರೂಪಿನ ಸೌತ್ ಕೊರಿಯಾ-ಜರ್ಮನಿ ಪಂದ್ಯದಲ್ಲಿ ಸೌತ್ ಕೊರಿಯಾ 2-0ರ ಗೆಲುವು ಸಾಧಿಸಿ ಹಾಲಿ ಚಾಂಪಿಯನ್ ಜರ್ಮನಿ ಪಂದ್ಯಾಟದಿಂದ ಹೊರಬಿದ್ದಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ 6 ಹೆಚ್ಚುವರಿ ನಿಮಿಷಗಳನ್ನು ಸೇರಿಸಿದಾಗ ಕೊರಿಯಾ ಗೋಲ್ ದಾಖಲಿಸಿ ಬಲಿಷ್ಟ ಜರ್ಮನಿಗೆ ಆಘಾತವನ್ನು ನೀಡಿತು.
90+2ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಕಿಮ್ ಯಂಗ್ ಗ್ವಾನ್ ಅವರು ಮೊದಲ ಗೋಲ್ ದಾಖಲಿಸಿ ಕೊರಿಯಾ ಗೆಲುವಿನ ಮುನ್ಸೂಚನೆ ನೀಡಿದರು. ಎದುರಾಳಿಯಿಂದ ಅಂತಿಮ ಕ್ಷಣದಲ್ಲಿ ಗೋಲ್ ದಾಖಲಾಗಿದ್ದು ಜರ್ಮನಿಗೆ ಒತ್ತಡವನ್ನು ನೀಡಿತು. ಅದಾಗಿ ಕೊನೇಕ್ಷಣ ಅಂದರೆ 90+6ನೇ ನಿಮಿಷದಲ್ಲಿ ಕೊರಿಯಾ ಮತ್ತೊಂದು ಗೋಲ್ ಬಾರಿಸಿತು.
ಪಂದ್ಯಾರಂಭವಾಗಿ 19ನೇ ನಿಮಿಷದಲ್ಲೇ ಕೊರಿಯಾ ಮೊದಲ ಗೋಲ್ ಬಾರಿಸುವುದರಲ್ಲಿತ್ತು. ಆದರೆ ಜರ್ಮನಿಯ ಗೋಲ್ ಕೀಪರ್ ಮ್ಯಾನುಯೆಲ್ ನ್ಯೂಯರ್ ಎದುರಾಳಿಪರ ಗೋಲ್ ದಾಖಲಾಗದಂತೆ ನೋಡಿಕೊಂಡರು.
ಇದಾಗಿ ದ್ವಿತೀಯಾರ್ಧದ 51ನೇ ನಿಮಿಷಲದಲ್ಲಿ ಜರ್ಮನಿಯ ಟಿಮೊ ವರ್ನರ್ ಅವರು ಗೋಲ್ ಬಾರಿಸಿ ಜರ್ಮನಿಗೆ ಮುನ್ನಡೆ ಕೊಡುವುದರಲ್ಲಿದ್ದರು. ಆದರೆ ಅವರ ಪ್ರಯತ್ನ ವಿಫಲವಾಯಿತು. ಒದ್ದ ಚೆಂಡು ಕೊರಿಯಾ ಗೋಲ್ ಪೋಸ್ಟ್ ನ ಹೊರಗಿಂದಾಗಿ ಹಾದುಹೋಯಿತು. ಅಂತಿಮವಾಗಿ ಹಾಲಿ ಚಾಂಪಿಯನ್ ಜರ್ಮನಿಗೆ ಮುಖಭಂಗ ಅನುಭವಿಸುವಂತಾಯ್ತು.