ಪುತ್ತೂರಿನಲ್ಲೊಂದು ಅಪರೂಪದ ವಿವಾಹ: ಜೆಸಿಬಿಯಲ್ಲೇ ಮದುಮಕ್ಕಳ ದಿಬ್ಬಣ

ಮದುವೆ ದಿಬ್ಬಣ ಎರಡು ಕಿ.ಮೀ ಜೆಸಿಬಿಯಲ್ಲೇ ಸಾಗಿ ಬಂದಾಗ!

ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್ ಆಗಿದ್ದು, ತನ್ನ ವಿವಾಹ ವಿನೂತನ ರೀತಿಯಲ್ಲಿ ಆಗಬೇಕೆಂದು ಕನಸು ಕಂಡಿದ್ದರು.

ಪುತ್ತೂರು: ಮದುವೆ’ ಪ್ರತಿಯೊಬ್ಬರ ಬದುಕಲ್ಲೂ ಒಂದು ಸಂಭ್ರಮದ ಕ್ಷಣ. ಮದುಮಗ –ಮದುಮಗಳು ಐಶಾರಾಮಿ ಕಾರುಗಳಲ್ಲೇ ಆಗಮಿಸುವುದು ಸಾಮಾನ್ಯ. ಜೆಸಿಬಿಯಲ್ಲಿ ದಿಬ್ಬಣ ಹೊರಡುವುದನ್ನು ನಾವಂತೂ ಕೇಳಿದ್ದಿಲ್ಲ. ಆದರೆ ಸಂಟ್ಯಾರ್ ನಿವಾಸಿ ಚೇತನ್ ಎಂಬವರು ಜೆಸಿಬಿ ಆಪರೇಟರ್ ಆಗಿದ್ದು, ಇವರ ಮದುವೆ ದಿಬ್ಬಣ ವಿವಾಹದ ಬಳಿಕ ಎರಡು ಕಿ.ಮೀ ಜೆಸಿಬಿಯಲ್ಲೇ ಸಾಗಿ ಜನರು ಕಣ್ಣು ಬಾಯಿ ಬಿಟ್ಟು ಈ ಸೊಬಗನ್ನು ಕಣ್ತುಂಬಿಕೊಂಡಿದ್ದಾರೆ.

ಮದುಮಗಳು ಈ ಹೊಸ ಪರಿಯ ಸಂಚಾರದಲ್ಲಿ ನಾಚಿ ಕೆನ್ನೆ ಕೇಂಪೇರಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿಬ್ಬಣ ಸಾಗಿಬಂದ ದೃಶ್ಯಗಳು ಹಲವರ ಮೊಬೈಲ್ ಗಳಲ್ಲಿ ಸೆರೆಯಾದವು.

ಚೇತನ್ ಕುಮಾರ್ ಅವರು ಮಮತ ಜೊತೆ ಕುಂಬ್ರ ಕೊಯಿಲತಡ್ಕದ ಶಿವ ಆಡಿಟೋರಿಯಂನಲ್ಲಿ ಸೋಮವಾರ ವಿವಾಹವಾದರು. ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್ ಆಗಿದ್ದು, ತನ್ನ ವಿವಾಹ ವಿನೂತನ ರೀತಿಯಲ್ಲಿ ಆಗಬೇಕೆಂದು ಕನಸು ಕಂಡಿದ್ದರು. ತಮ್ಮ ಬದುಕಿನ ದಾರಿಯಾದ ಜೆಸಿಬಿಯಲ್ಲೇ ವಿವಾಹ ದಿಬ್ಬಣ ನಡೆಸಿ ಖುಶಿಪಟ್ಟಿದ್ದಾರೆ.

Get real time updates directly on you device, subscribe now.