ಪ್ರಸಿದ್ದ ಬೀಡಿ ಉದ್ಯಮಿ ಯು.ನರಸಿಂಹ ಶೇರುಗಾರ್ ಇನ್ನಿಲ್ಲ

ಟೆಲಿಫೋನ್ ಸಾಹುಕಾರ್” ಎಂದೇ ಚಿರಪರಿಚಿತರಾಗಿದ್ದರು.

ಹೆಮ್ಮಾಡಿಯ ಪ್ರಸಿದ್ದ ಬೀಡಿ ಉದ್ಯಮಿ ಯು.ನರಸಿಂಹ ಶೇರುಗಾರ್(78) ವಯೋಸಹಜ ಅಸೌಖ್ಯದಿಂದ ಗುರುವಾರ ನಿಧನರಾಗಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಹೆಮ್ಮಾಡಿಯ ಪ್ರಸಿದ್ದ ಬೀಡಿ ಉದ್ಯಮಿ ಯು.ನರಸಿಂಹ ಶೇರುಗಾರ್(78) ವಯೋಸಹಜ ಅಸೌಖ್ಯದಿಂದ ಗುರುವಾರ ನಿಧನರಾಗಿದ್ದಾರೆ.

ಮೂಲತಃ ಕುಂದಾಪುರ ಮೀನು ಮಾರುಕಟ್ಟೆ ರಸ್ತೆಯ ನಿವಾಸಿಯಾಗಿರುವ ಯು. ನರಸಿಂಹ ಶೇರುಗಾರ್ ಮೂವತ್ತು ವರ್ಷಗಳ ಹಿಂದೆ ಹೆಮ್ಮಾಡಿಗೆ ಬಂದು ನೆಲೆಸಿದ್ದರು. ಬೀಡಿ ಉದ್ಯಮ ಆರಂಭಿಸಿ ನಿರಂತರ ಮೂವತ್ತೈದು ವರ್ಷಗಳ ಕಾಲ ತಾಲೂಕಿನ ವಿವಿಧೆಡೆಗಳಲ್ಲಿ ಬೀಡಿ ಬ್ರ್ಯಾಂಚುಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಮಹಿಳೆಯರು, ಯುವತಿಯರಿಗೆ ಉದ್ಯೋಗ ಒದಗಿಸಿದ್ದರು.

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ನರಸಿಂಹ ಶೇರುಗಾರ್ ಟೆಲಿಫೋನ್ ಸಾಹುಕಾರ್” ಎಂದೇ ಚಿರಪರಿಚಿತರಾಗಿದ್ದರು. ಕಳೆದ ಎರಡು ವರ್ಷಗಳಿಂದ ವಯೋಸಹಜ ಅಸೌಖ್ಯದಿಂದ ಬಳಲುತ್ತಿದ್ದರು.

ಮೃತರು ಪತ್ನಿ ಪುಷ್ಪಲತಾ ಹಾಗೂ ಮೂವರು ಪುತ್ರರಾದ ಸತ್ಯನಾರಾಯಣ ರಾವ್, ಶಿವಾನಂದ ರಾವ್, ಕೃಷ್ಣಮೂರ್ತಿ ರಾವ್ ಅವರನ್ನು ಅಗಲಿದ್ದಾರೆ.

Get real time updates directly on you device, subscribe now.